ವಿಂಡೋಸ್ ೧೧ ಮೈಕ್ರೋಸಾಫ್ಟ್ ಅಭಿವೃದ್ಧಿಪಡಿಸಿದ ವಿಂಡೋಸ್ ಎನ್ಟಿ ಆಪರೇಟಿಂಗ್ ಸಿಸ್ಟಮ್ನ ಮುಂಬರುವ ಪ್ರಮುಖ ಆವೃತ್ತಿಯಾಗಿದೆ. 2021 ರ ಜೂನ್ 24 ರಂದು ಘೋಷಿಸಲಾಯಿತು, 2021 ರ ಕೊನೆಯಲ್ಲಿ ಬಿಡುಗಡೆಯಾಗುವ ಸಾಧ್ಯತೆಗಳು ಇವೆ. == ವಿಶೇಷತೆಗಳು == ವಿಂಡೋಸ್ ೧೧, 2015 ರ ನಂತರದ ಮೊದಲ ಪ್ರಮುಖ ವಿಂಡೋಸ್ ಬಿಡುಗಡೆಯಾಗಿದೆ. ವಿಂಡೋಸ್ 11 ಅಮೆಜಾನ್ ನ ಅಪ್ಲಿಕೇಶನ್ ಸ್ಟೋರ್ ಮೂಲಕ ಆಂಡ್ರಾಯ್ಡ್ ಅಪ್ಲಿಕೇಶನ್ ಗಳನ್ನು ಬೆಂಬಲಿಸುತ್ತದೆ. ವಿಂಡೋಸ್ 10ನಲ್ಲಿದ್ದ ಲೈವ್ ಟೈಲ್ ಗಳನ್ನು ವಿಂಡೋಸ್ 11ನಲ್ಲಿ ತೆಗೆದುಹಾಕಲಾಗಿದೆ. ಅವುಗಳನ್ನು ಐಕಾನ್ ಗಳ ಗ್ರಿಡ್ ಆಗಿ ಬದಲಾಯಿಸಲಾಗಿದೆ. ವಿಂಡೋಸ್ 11 ನ ನೂತನ ಅಪ್ ಡೇಟ್ ಗಾತ್ರದಲ್ಲಿ ಶೇ.40 ರಷ್ಟು ಕಡಿಮೆಯಾಗಲಿದೆ. == ಉಲ್ಲೇಖಗಳು ==